ನಗರದಲ್ಲಿ ಗೌರಿ ಗಣೇಶ ಹಬ್ಬಕ್ಕಾಗಿ ಮಾರಾಟ ಮಾಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ನಗರಪಾಲಿಕೆ ತಂಡ ನಗರದ ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಗರದ ಮಾತೃಮಂಡಳಿ ವೃತ್ತದ ಸಮೀಪ ಮಾರಾಟ ಮಾಡುತ್ತಿರುವ ಮೂರ್ತಿಗಳು ಪಿಓಪಿ ಆಗಿದೆಯೇ ಹಾಗೂ ಅದಕ್ಕೆ ಬಳಸಿರುವ ಬಣ್ಣ ರಾಸಾಯನಿಕಯುಕ್ತ ಆಗಿದೆಯೇ ಎಂಬುದನ್ನು ತಂಡ ಪರಿಶೀಲನೆ ನಡೆಸಿತು. ಬಣ್ಣಗಳಲ್ಲಿ ಬಳಸಿರುವ ಅಸಂಬದ್ಧತೆ ಕುರಿತು ಅಧಿಕಾರಿಗಳು ಮಾರಾಟಗಾರರಿಗೆ ಸಲಹೆ ಸೂಚನೆ ನೀಡಿದರು.