ಶಿರಸಿ ಕಸ್ತೂರಬಾ ನಗರದ ಎಂಟನೆ ತರಗತಿಯ ಒರ್ವ ವಿದ್ಯಾರ್ಥಿನಿ ಹಾಗು ಆರನೇ ತರಗತಿಯ ವಿದ್ಯಾರ್ಥಿನಿ ಸೇರಿ ಮನೆಯಿಂದ ಚಿತ್ರಕಲೆ ಕ್ಲಾಸ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆ.ಈ ಬಗ್ಗೆ ಮಾರ್ಕೆಟ್ ಠಾಣೆ ಪೋಲಿಸರಿಗೆ ಮಾಹಿತಿ ಬಂದ ತಕ್ಷಣವೇ ಡಿವಾಯಸ್ಪಿ ಗೀತಾ ಪಾಟಿಲ್ ಮಾರ್ಗದರ್ಶನ ಹಾಗು ಸಿಪಿಆಯ್ ಶಶಿಕಾಂತ ವರ್ಮಾ ನೇತ್ರತ್ವದಲ್ಲಿ ಪಿಎಸ್ಆಯ್ ರತ್ನಾಕುರಿಹಾಗೂ ತಮ್ಮ ಸಿಬ್ಬಂದಿಗಳು ಬಾಲಕಿಯರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.ಈ ಸುದ್ದಿ,ಫೋಟೋ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ.ಬಾಲಕಿಯರು ಸುರಕ್ಷಿತವಾಗಿಮನೆಗೆ ಬರಲೆಂದು ಎಲ್ಲರ ಆಶಯ ವಾಗಿದೆ.