ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತಪರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಫಜಲಪುರನಲ್ಲಿ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ-ವಿಜಯಪುರ ರಾಜ್ಯ ಹೆದ್ದಾರಿಯ ಬೋಗನಳ್ಳಿ ಕ್ರಾಸ್ ಬಳಿ ಪ್ರತಿಭಟನೆ ನಡೆಸಲಾಯಿತು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಜಮೀನು ಮತ್ತು ಮನೆಗಳನ್ನು ಸರ್ವೆ ಮಾಡಿ ತಕ್ಷಣ ಪರಿಹಾರ ಒದಗಿಸಬೇಕು. ರೇವೂರ ಸೇತುವೆ ಎತ್ತರಕ್ಕೇರಿಸಿ ಸಾರ್ವಜನಿಕರ ಓಡಾಟಕ್ಕೆ ಅನವು ಮಾಡಿಕೊಡಲು ಆಗ್ರಹಿಸಿದರು. ಬುಧವಾರ 11 ಗಂಟೆಯಿಂದ 4 ಗಂಟೆವರೆಗೆ ಪ್ರತಿಭಟನೆ ನಡೆಸಲಾಯಿತು... ಸ್ಥಳಕ್ಕೆ ದೌಡಾಗಿಸಿದ ಅಧಿಕಾರಿಗಳು ಸಕರಾತ್ಮಕ ಸ್ಪಂಧನೆ ನೀಡಿದ್ದಾರೆ.