ರಾಮನಗರ -- ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಪ್ರಕರಣದಲ್ಲಿ ರೇಡಿಯಾಲಜಿಸ್ಟ್ ಡಾ.ಶಶಿ ಅವರನ್ನು ಅಮಾನತು ಮಾಡಿದೆ ಎಂದು ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ತಿಳಿಸಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು ಜಿಲ್ಲಾ ಆಸತ್ರೆಯ ರೇಡಿಯಾಲಜಿಸ್ಟ್ ಅವರನ್ನು ಅಮಾನತು ಮಾಡಿರುವುದರ ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬ ವೈದ್ಯ ಸೇರಿದಂತೆ ನಾಲ್ಕು ಮಂದಿಯ ವಿರುದ್ದ ಎಪ್ಐಆರ್ ದಾಖಲಾಗಿದೆ. ಅಲ್ಲದೇ ನ್ಯಾಯಾಲಯದದಲ್ಲೂ ಎರಡು ಪಿಸಿಆರ್ ಪ್ರಕರಣ ದಾಖಲಿಸಲಾಗಿದೆ ಎಂದು ಡಿಎಚ್ಓ ಡಾ.ನಿರಂಜನ್ ತಿಸಿದರು.