ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಅವರು ಪ್ರಮುಖ ಆರೋಪಿ ಆಗಿದ್ದಾರೆ. ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈಗ ಅವರ ಪರವಾಗಿ ವಾದ ಮಾಡಲು ಲಾಯರ್ ಬಾಲನ್ ಸಜ್ಜಾಗಿದ್ದಾರೆ. ತಮ್ಮ ಮುಂದಿನ ನಡೆ ಏನು ಎಂಬುದನ್ನು ಗುರುವಾರ ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಜಾಮೀನು ಕೊಡಿಸಲು ತಾವು ಪ್ರಯತ್ನಿಸುವುದಾಗಿ ಬಾಲನ್ ಹೇಳಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರ ವಿರುದ್ಧ ಸಾಕ್ಷಿಯೇ ಇಲ್ಲ ಎಂದು ಲಾಯರ್ ಬಾಲನ್ ಹೇಳಿದ್ದಾರೆ. ನಾನು ಚಾರ್ಜ್ಶೀಟ್ ಓದಿದ್ದೇನೆ. ಕಣ್ಣಾರೆ ಕಂಡ ಸಾಕ್ಷಿಗಳು ಯಾರೂ ಇಲ್ಲ ಎಂದಿದ್ದಾರೆ.