ಆಂಧ್ರಪ್ರದೇಶದ ಆದೋನಿ ಹಾಗೂ ಆದೋನಿ ಮೂಲಕ ಕಾರ್ಯಾಚರಣೆಯಾಗುವ ಕರಾರಸಾ ನಿಗಮದ ಸಾರಿಗೆಗಳ ಕಾರ್ಯಾಚರಣೆಯನ್ನು ಆ.31 ರಿಂದ ಆದೋನಿ ಎ.ಪಿ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಕಕರಸಾ ನಿಗಮ, ಕರಾರಸಾ ನಿಗಮ ಮತ್ತು ವಾಕರಸಾ ಸಂಸ್ಥೆಯಿAದ ಕಾರ್ಯಾಚರಣೆಯಾಗುವ ಮಂತ್ರಾಲಯ, ರಾಯಚೂರು, ಎಮ್ಮಿಗನೂರು, ಶ್ರೀಶೈಲಂ ವಯಾ ಆದೋನಿ ಹಾಗೂ ಆದೋನಿ ಸಾರಿಗೆಗಳ ಕಾರ್ಯಾಚರಣೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆದೋನಿ ಪಟ್ಟಣದ ಎ.ಪಿ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ.