ತಾಲ್ಲೂಕಿನ ಬಿಜಿಹಳ್ಳಿ ಬಳಿ ಸೋಮವಾರ ಮುಂಜಾನೆ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ ಬೋನಿಗೆ ಚಿರತೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ತಾಲ್ಲೂಕಿನ ಹಲವು ಕಡೆ ಕುರಿ, ಮೇಕೆ, ಹಸು ಹಾಗು ಗಿಲ್ಕೇನಹಳ್ಳಿಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿ, ಜನರು ಆತಂಕದ ಮೂಡಿಸಿದ್ದಲ್ಲದೆ, ಭಾನುವಾರ ರಾತ್ರಿ ಬಿಜಿಹಳ್ಳಿಯಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಲು ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಚಿರತೆ ಬೋನಿಗೆ ಕೆಡವಲು ಯಶಸ್ವಿಯಾಗಿದ್ದಾರೆ.