ಪೊಲೀಸರಿಗೆ ಸಾಮಾಜಿಕ ಬದ್ದತೆಯಿದ್ದರೆ, ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆಗಸ್ಟ್ 30ರಂದು ಬೆಳಿಗ್ಗೆ 10:30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಸಂವಿಧಾನ ನೀಡುವ ರಕ್ಷಣೆಯನ್ನು ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ದುರ್ಬಲವರ್ಗಗಳ ಮೇಲಾಗುವ ದೌಜರ್ನ್ಯಗಳನ್ನು ಪೊಲೀಸರು ತಡೆಗಟ್ಟಬೇಕಿದೆ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಪೊಲೀಸರದ್ದು" ಎಂದರು.