ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯವನ್ನು ಶಿಕ್ಷಕ ವರ್ಗ ಉತ್ತಮವಾಗಿ ನಡೆಸಿಕೊಡಲಿದೆ. ಶಿಕ್ಷಕರ ವಿಚಾರದಲ್ಲಿ ಬಿಜೆಪಿ ಗೊಂದಲಗಳನ್ನು ಮೂಡಿಸುವ ಕೆಲಸ ಮಾಡಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಮೀಕ್ಷೆ ಮಾಡುವುದು ಅಗತ್ಯ. ವಿವಿಧ ಸಮುದಾಯಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿದುಕೊಳ್ಳಬೇಕಾಗುತ್ತದೆ. ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ. ಬಿಜೆಪಿಯವರು ಗಣೇಶ ಹಬ್ಬ ದಲ್ಲಿ ಗಲಾಟೆ ಹಬ್ಬ ಮಾಡ್ತಾರೆ, ಬಿಜೆಪಿಯವರು ಹೇಳೋದೆಲ್ಲವೂ ಸುಳ್ಳು ಎಂದು ಹೇಳಿದರು.