ಬಿಯರ್ ಬಾಟಲ್, ಕಲ್ಲುಗಳಿಂದ ಹೊಡೆದು ಕ್ಯಾಬ್ ಚಾಲಕನನ್ನ ಭೀಕರವಾಗಿ ಹತ್ಯೆಗೈದಿರುವ ಘಟನೆ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ನಡೆದಿದೆ.26 ವರ್ಷದ ಕೌಶಿಕ್ ಕೊಲೆಯಾದ ದುರ್ದೈವಿ. ಸೆಪ್ಟೆಂಬರ್ 8ರಂದು ಬೆಳಗ್ಗಿನ ಜಾವ 2:30ರ ಸುಮಾರಿಗೆ ಘಟನೆ ನಡೆದಿದ್ದು, ಪಾನಮತ್ತರಾಗಿದ್ದ ಸ್ನೇಹಿತರೇ ಗಲಾಟೆ ಆರಂಭಿಸಿ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ. 2020ರಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಕೌಶಿಕ್, ನಂತರ ಜಾಮೀನಿನ ಮೇಲೆ ಹೊರಬಂದು ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಸದ್ಯ ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.