ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ, ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿಯ ಮಧ್ಯದಲ್ಲಿರುವ ಪ್ರಸಿದ್ಧ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. ಭಕ್ತರಿಗೆ ದರ್ಶನ ನಿಷೇಧಿಸಲಾಗಿದ್ದು, ಅಮವಾಸೆ ಪ್ರಯುಕ್ತ ಹರಿದು ಬರುತ್ತಿರುವ ಅಪಾರ ಪ್ರಮಾಣದ ಭಕ್ತರ ದರ್ಶನಕ್ಕಾಗಿ ಯಲ್ಲಮ್ಮ ದೇವಿಯ ಪಾದುವಿಕೆ ದರ್ಶನ ಹಾಗೂ ಗ್ರಾಮದ ಹಳೆಯ ಯಲ್ಲಮ್ಮ ದೇವಾಲಯದಲ್ಲಿ ತಾಯಿಯ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಶೆನಿವಾರ 1 ಗಂಟೆಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ..