ಓವರ್ ಸ್ಪೀಡ್, ಅಡ್ಡಾದಿಡ್ಡಿ ವಾಹನ ಚಾಲನೆ ಹಾಗೂ ಬೈಕ್ ಮೇಲೆ ಸ್ಟಂಟ್ ಮಾಡಿದಲ್ಲದೆ ವಿಡಿಯೋ ಹರಿಬಿಟ್ಟ ಯುವಕನಿಗೆ ಪೊಲೀಸರು ಸಕತ್ ಚುರುಕು ಮುಟ್ಟಿಸಿದ್ದಾರೆ. ಟ್ರಾಫಿಕ್ ಇನ್ಸಪೇಕ್ಟರ್ ಖಾಜಾ ಹುಸೇನ್ ಅವರಿಗೆ ವಿಡಿಯೋ ತಲುಪಿದ್ದಂತೆ ಕ್ರಮ ಕೈಗೊಳ್ಳಲಾಗಿದೆ.. ಪ್ರಕರಣದಲ್ಲಿ 24 ವರ್ಷದ ಅಬ್ದುಲ್ ಸಲ್ನಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬೈಕ್ ಜಪ್ತಿ ಮಾಡಲಾಗಿದೆ. ಯುವಕನ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲು ಆರ್ ಟಿ ಒ ಗೆ ಶಿಫಾರಸು ಕೂಡ ಮಾಡಲಾಗಿದೆ ಎಂದು ಗುರುವಾರ 5 ಗಂಟೆಗೆ ಮಾಹಿತಿ ಲಭ್ಯವಾಗಿದೆ.