ಸಕಲೇಶಪುರ: ಸಾಲಬಾದೆ ತಾಳಲಾರದೆ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಎಸಳೂರು ಹೋಬಳಿ ಸಂತೆಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ತಮ್ಮ ಕೃಷಿ ಜಮೀನಿನಲ್ಲಿ ಬೆಳೆ ಬೆಳೆಯಲು ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದ ಹಿನ್ನೆಯಲ್ಲಿ ಬ್ಯಾಂಕ್ ನಿಂದಾ ನೋಟೀಸ್ ನೀಡಲಾಗಿತ್ತು, ಒಂದೆಡೆ ಈ ಬಾರಿ ಸುರಿದ ಭಾರೀ ಮಳೆಗೆ ಬೆಳೆ ಹಾಳಾಗಿ ಆದಾಯವು ಕುಂಠಿತ ಆಗಿತ್ತು ಇದರ ಬಗ್ಗೆ ಕುಟುಂಬಸ್ಥರ ಬಗ್ಗೆಯೂ ಹೇಳಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಸಾಲ ತೀರಿಸಲು ದಾರಿ ಕಾಣದೆ ಮನನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುವ ಎಸ್.ಜಿ ದಿವಾಕರ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.