ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ೫೦ ವರ್ಷದ ಶೋಭಾ ಅಕ್ಕೀವಾಡ ಎಂಬ ಮಹಿಳೆ ಹುನ್ನೂರ ಕರೆಯ ನೀರಲ್ಲಿ ಬಿದ್ದು ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ೫-೬ ತಿಂಗಳಿAದ ವಿಪರೀತ ತಲೆನೋವಿನಿಂದ ಮಹಿಳೆ ಬಳಲುತ್ತಿದ್ದು ಆಸ್ಪತ್ರೆಗೆ ತೋರಿಸುತ್ತಾ ಬಂದರೂ ಗುಣ ಮುಖ ಆಗದೇ ಇರುವದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪೆ ್ಸಗೊಂಡು ಕೆರೆಯಲ್ಲಿ ಬಿದ್ದು ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಜಮಖಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಸಾವಿನಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕುಟುಂಬಸ್ಥರು ವರದಿಯಲ್ಲಿ ತಿಳಿಸಿದ್ದಾರೆ ಎಂದು ಸೆಪ್ಟಂಬರ್ ೦೨ ಮಧ್ಯಾಹ್ನ ೨ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.