ಸಾಗರ ಶಾಂತಿಯುತವಾಗಿದೆ, ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ಶಿವಮೊಗ್ಗ ಜಿಲ್ಲಾ ಎಸ್.ಪಿ ಮಿಥುನ್ ಕುಮಾರ್ ಹೇಳಿದರು. ಮಂಗಳವಾರ ಸಂಜೆ 7ಗಂಟೆಗೆ ಸಾಗರದ ಶಾರದಂಬ ಸಭಾಭವನದಲ್ಲಿ ಎರಡು ಸಮುದಾಯಗಳ ಮುಖಂಡರ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಘಟನೆ ಇಟ್ಟಿಕೊಂಡು ಅಪಪ್ರಚಾರ ಮಾಡುವುದು ಸೂಕ್ತವಲ್ಲ, ಮೊನ್ನೆ ನಡೆದ ಘಟನೆಯ ಕುರಿತು ಎಲ್ಲಾ ಆಯಾಮ ಕಡೆಯಿಂದ ತನಿಖೆ ಮಾಡುತ್ತಿದ್ದೇವೆ. ಬೇರೆ ಜಿಲ್ಲೆಗೂ ಶಿವಮೊಗ್ಗ ಜಿಲ್ಲೆಯ ಹೋಲಿಕೆ ಮಾಡುವುದು ಬೇಡ , ಪೊಲೀಸ್ ಇಲಾಖೆ ಏನು ಕೆಲಸ ಮಾಡಬೇಕು ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದರು