ಶಿರಸಿ :ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲಾ ಮುಂಭಾಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ರಸ್ತೆ ಡಿವೈಡರ ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಶಾಂತಿ ನಗರದ ನಿವಾಸಿ, ನಿಶಾಂತ್ ಬನ್ವಾರಿ ಸಿಂಗ್ ಚೌಧರಿ (20) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸಿಪಿಐ ಶಶಿಕಾಂತ್ವರ್ಮಾ,ಪಿ ಎಸ್ ಆಯ್ ರತ್ನಾ ಕುರಿ ಭೇಟಿ ನೀಡಿ ಪರಿಶೀಲಿಸಿದರು.