ಮಡಿಕೇರಿಯಲ್ಲಿ ಸಹಾಯಕ ಸಂಚಾರಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐ.ಪಿ ನಂದ ಕುಶಾಲನಗರಕ್ಕೆ ವರ್ಗಾವಣೆಗೊಂಡಿದ್ದು, ಅವರನ್ನು ಮಡಿಕೇರಿ ನಗರ ಆಟೋ ಮಾಲೀಕ ಚಾಲಕರ ಸಂಘದಿಂದ ಬೀಳ್ಕೊಡಲಾಯಿತು. ಮಡಿಕೇರಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಸಂಚಾರಿ ಠಾಣಾಧಿಕಾರಿ ಐ.ಪಿ ನಂದ, ಸರ್ಕಾರದ ಇಲಾಖೆಗಳಲ್ಲಿ ವರ್ಗಾವಣೆ ಸಾಮಾನ್ಯ. ಮಡಿಕೇರಿಯಲ್ಲಿ ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಅವಿಸ್ಮರಣೀಯವಾಗಿ ಉಳಿಯಲಿದೆ. ಇಲ್ಲಿನ ಜನತೆ ಅಗತ್ಯ ಸಹಕಾರ ನೀಡಿದ್ದಾರೆ ಎಂದರು. .