ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಸಾರ್ವಜನಿಕ ಗಣಪತಿಗಳ ವಿಸರ್ಜನಾ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ಈ ವೇಳೆ ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಚಾ ಮಹಾರಾಜಾ ಸೇರಿದಂತೆ ನೂರಕ್ಕೂ ಹೆಚ್ಚು ಸಾರ್ವಜನಿಕ ಗಣಪತಿಗಳು ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಇನ್ನೂ ಡಿಜೆ ಹಾಡಿಗೆ ಸಾರ್ವಜನಿಕರು ಕುಣಿದು ಕುಪ್ಪಳಿಸಿದರು. ಹನ್ನೊಂದನೇ ದಿನಗಳ ಪ್ರತಿಷ್ಠಾಪನೆಗೊಂಡಿದ್ದ ಸಾರ್ವಜನಿಕ ಶ್ರೀ ಗಣಪತಿಗಳ ಮೂರ್ತಿಗಳು ಇಂದು ವಿಸರ್ಜನೆಗೊಳ್ಳಲಿವೆ.