ಧರ್ಮಸ್ಥಳ ಹಿಂದೂಗಳ ಆಧ್ಯಾತ್ಮಿಕ ಶಕ್ತಿಯ ತಾಣ. ಅದಕ್ಕೆ ಕಳಂಕ ತರುವ ಕೆಲಸ ಈಗ ನಡೆಯುತ್ತಿದೆ. ಈಗ ಅಲ್ಲಿ ತನಿಖೆ ನಡೆಯುತ್ತಿದ್ದು ಎಫ್ ಎಸ್ ಎಲ್ ವರದಿ ಇನ್ನೂ ಬರಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಮಾತನಾಡಿದ ಅವರು ಹಿಂದುಗಳ ನಂಬಿಕೆಯ ತಾಣವನ್ನು ಪ್ರಶ್ನೆ ಮಾಡುವ ಮೂಲಕ ಅಪನಂಬಿಕೆ ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಶೀಘ್ರವೇ ಉತ್ತರ ಸಿಗಲಿದೆ ಎಂದರು.