ವಿರಾಜಪೇಟೆ: ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಯ್ದ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ, ದ್ವಿಚಕ್ರವಾಹನವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿತರಿಸಿದರು.ಶಾಸಕರ ವಿಶೇಷ ನಿಧಿಯಿಂದ ನೀಡುತ್ತಿರುವ ಈ ಸೌಲಭ್ಯವನ್ನು ವಿತರಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದೆ. ವಿಶೇಷ ಚೇತನರು ತಮ್ಮ ನೂನ್ಯತೆಯನ್ನು ಮರೆತು ಸಮಾಜದಲ್ಲಿ ತಮ್ಮ ಕೈಲಾದ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕೆಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು. ವಿಶೇಷ ಆದ್ಯತೆ ಮೇರೆಗೆ ಇಂತಹ ವ್ಯಕ್ತಿಗಳಿಗೆ ತಾನು ಸಹಾಯ ಮಾಡಲು ಸದಾ ಸಿದ್ಧವಿರುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು