ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಇಟಗಿ ಗ್ರಾಮ ಸೇರಿದಂತೆ ಸುತ್ತನುತ್ತಲ ಗ್ರಾಮಗಳಲ್ಲಿ ಬಳ್ಳೊಳ್ಳಿ ಬೆಳೆದ ರೈತರು ಇದೀಗ ಸಂಕಷ್ಡಕ್ಜೆ ಸಿಲುಕಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಳ್ಳೊಳ್ಳಿ ಬೆಳೆ ಹಾಳಾಗಿದೆ. ಅಲ್ಲದೆ ಒಣಗಲು ಹಾಕಿದ್ದ ಬಳ್ಳೊಳ್ಳಿ ರಾಶಿಗಳು ಕೊಳೆಯಲಾರಂಭಿಸಿವೆ. ಸಹಸ್ರಾರು ರೂಪಾಯಿ ಖರ್ಚುಮಾಡಿ ಬೆಳೆದ ಬೆಳೆ ವರುಣನ ಆರ್ಭಟಕ್ಕೆ ನಲುಗಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.