ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಿಂದ ಹಲವಾರು ಕೆರೆಗಳಿಗೆ ನೀರು ತುಂಬಿಸಿರುವುದರಿಂದ ತಾಲ್ಲೂಕಿನಲ್ಲಿ ಬಹುತೇಕ ರೈತರು ಅಡಿಕೆ ಬೆಳೆ ಬೆಳೆದಿರುತ್ತಾರೆ. ಆದರೆ, ಅಡಿಕೆ ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಬೇರೆ ಜಿಲ್ಲೆಗಳಿಗೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ರೈತ ಸಂಘದ ಜಿಲ್ಲಾಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರು ಹೇಳಿದರು. ನಗರದ ಎಪಿಎಂಸಿ ಮುಂಭಾಗದಲ್ಲಿ ಬುಧವಾರ ವರ್ತಕರಿಗೆ ಅಡಿಕೆ ಮಾರಾಟ ಮಾಡಲು ಪರವಾನಿಗೆನೀಡುವಂತೆ ಒತ್ತಾಯಿಸಿ ರೈತಸಂಘದಿಂದ ಪ್ರತಿಭಟನೆ ನಡೆಸಿ ಮಾತನಾಡಿದರು.ನಗರದ ಬಹುದೊಡ್ಡ ವಿಸ್ತೀರ್ಣವಿರುವ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಹಸಿಅಡಿಕೆ, ರಾಶಿಅಡಿಕೆ, ಚಾಲಿಅಡಿಕೆ ಮಾರಾಟ ಮಾಡಲು ಪರವಾನಿ ನೀಡಬೇಕು ಎಂದರು.