ಯಲ್ಲಾಪುರ : ಮರ ಬಿದ್ದು ಮೃತಪಟ್ಟ ದನಗರಗೌಳಿ ಸಮುದಾಯದ ಮಹಿಳೆಯರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ಶಾಸಕ ಶಿವರಾಮ ಹೆಬ್ಬಾರವಿತರಿಸಿದರು. ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಡೋಮಗೇರಿಯಲ್ಲಿ ಮರದಡಿ ಸಿಲುಕಿ ಮೃತಪಟ್ಟವರ ಮನೆಗೆ ಶಾಸಕ ಶಿವರಾಮ ಹೆಬ್ಬಾರ ಗುರುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.