ಹಾವೇರಿಯ ಬಸವೇಶ್ವರ ನಗರದಲ್ಲಿರುವ ದೀಪಾ ಉಳಿವೆಪ್ಪ ಹಲಗಣ್ಣನವರ್ ಕಲಾವಿದೆ. ದೀಪಾ ತಮ್ಮ ಕಲೆಯನ್ನ ಗಣೇಶನ ಮುಂದೆ ಪ್ರಯಾಗರಾಜನಲ್ಲಿ ನಡೆದ ಮಹಾಕುಂಭಮೇಳದ ಪ್ರತಿಕೃತಿ ರಚಿಸಲು ಬಳಸಿದ್ದಾರೆ. ಕುಂಭಮೇಳದ ಕೆಲ ದೃಷ್ಯಗಳನ್ನು ತಮ್ಮ ಕಲಾಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನ ದೀಪಾ ಮಾಡಿದ್ದಾರೆ. ದೀಪಾರ ಈ ಪ್ರಯಾಗರಾಜ್ ಪ್ರತಿಕೃತಿ ನೋಡಲು ಭಕ್ತರ ದಂಡೇ ಆಗಮಿಸುತ್ತಿದೆ.