ಕನ್ನಡಕ್ಕೆ ಅಪಮಾನ ಮಾಡಿರುವ ಆರೋಪ ಹಿನ್ನೆಲೆ ಸೋನು ನಿಗಮ್ ಅವರನ್ನ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಅಸಹಕಾರ ಕೊಡೋದಕ್ಕೆ ಈ ಹಿಂದೆ ತೀರ್ಮಾನ ಆಗಿತ್ತು. ಕನ್ನಡ ಪರ ಸಂಘಟನೆಗಳ ನಿರಂತರ ಪ್ರತಿಭಟನೆಯಿಂದ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿತ್ತು. ಆದ್ರೀಗ ಏಕಾಏಕಿ ದಿಡೀರ್ ಅಂತ ಫಿಲಂ ಚೇಂಬರ್ ಅಸಹಕಾರವನ್ನು ಹಿಂತೆಗೆದುಕೊಂಡಿದೆ ಸಿನಿಮಾದಲ್ಲಿ ಸೋನು ನಿಗಮ್ ಹಾಡೋದಿಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ವಿಚಾರ ಕರವೇ ನಾರಾಯಣಗೌಡ ಬಣದ ಧರ್ಮ ಕಿಡಿ ಕಾರೋದಕ್ಕೆ ಕಾರಣ ಆಗಿದೆ. ಆಗಸ್ಟ್ 27ರ ಸಂಜೆ 8 ಗಂಟೆಯ ಸುಮಾರಿಗೆ ಈ ವಿಚಾರ ಸಂಬಂಧ ವಿಡಿಯೋ ಹರಿಬಿಟ್ಟಿದ್ದು ಫಿಲಂ ಚೇಂಬರ್ ವಿರುದ್ಧ ಪ್ರತಿಭಟನೆಯ ವಾರ್ನಿಂಗ್ ಕೊಟ್ಟಿದ್ದಾರೆ