ಯಲ್ಲಾಪುರ :ತಾಲೂಕಿನ ಚವತ್ತಿಯಿಂದ ತಾರೇಹಳ್ಳಿ ಕ್ರಾಸ್‌ವರೆಗಿನ ಭಾಗದಲ್ಲಿ ದೊಡ್ಡದೊಡ್ಡ ಹೊಂಡಗಳಿಂದ ತುಂಬಿ ಹೋಗಿದೆ. ಅದನ್ನು ಸರಿಪಡಿಸದೇ ಇರುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಸ್ಥಳೀಯರು, ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ -ಶಿರಸಿ ರಾಜ್ಯ ಹೆದ್ದಾರಿ ಹದಗೆಟ್ಟು ಹೊಂಡ-ಗುಂಡಿಗಳು ಹೆಚ್ಚಾಗಿವೆ. ವಾಹನ ಸವಾರರು ಓಡಾಡುವುದು ತೀರಾ ಕಷ್ಟದಾಯಕವಾಗಿದೆ.