ನವಲಗುಂದ ನಗರದ ಪಂಚಗೃಹ ಹಿರೇಮಠದ ನೂತನ ಪಟ್ಟಾಧಿಕಾರಿಯನ್ನು ನೇಮಿಸುವ ಕುರಿತು ಪರಮಪೂಜ್ಯ ಸಿದ್ದೇಶ್ವರ ಶಿವಾಚಾರ್ಯರ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಡೆದ ಪೂರ್ವ ಸಭೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಭಾಗವಹಿಸಿ, ಕಾಶಿ ಜಗದ್ಗುರು ಪೀಠ ಹಾಗೂ ರಂಭಾಪುರಿ ಪೀಠದ ಪೂಜ್ಯರುಗಳನ್ನು ಭೇಟಿ ಮಾಡಲು ತೀರ್ಮಾನಿಸಲಾಯಿತು.ಈ ಸಭೆಯಲ್ಲಿ ಷ.ಬ್ರ.ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಶಿರಕೋಳ, ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಅನ್ನದಾನೀಶ್ವರ ದೇವಮಂದಿರ ಮಹಾಮಠ ಮಣಕವಾಡ, ಶ್ರೀ ಷ.ಬ್ರ.ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜಡೆಮಠ ಮೊರಬ ಸೇರಿದಂತೆ ಉಪಸ್ಥಿತರಿದ್ದರು.