ಹಾಸನ: ಭುವನಹಳ್ಳಿ ಗ್ರಾಮದಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಇಂದು ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮದಲ್ಲಿ ಪ್ರಮುಖವಾಗಿ ಸ್ಮಶಾನ ಜಾಗಕ್ಕೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ. ಹೊಸದಾಗಿ ಜಾಗ ಗುರುತು ಮಾಡಿ ಸ್ಮಶಾನಕ್ಕೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.ಬಳಿಕ ಸುರಕ್ಷತಾ ಹಿತ ದೃಷ್ಟಿಯಿಂದ ಭುವನಹಳ್ಳಿ ಕೆರೆ ಬದಿಗೆ ಇದಕ್ಕೂ ತಡೆಗೋಡೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸಿ ಕೊಡಲಾಗುವುದು ಎಂದು ಸೂಚನೆ ನೀಡಿದರು.