ಸಂಡೂರು ಪಟ್ಟಣದಲ್ಲಿ ರೈತರು ಸೋಮವಾರ ಬೆಳಿಗ್ಗೆ 11ಗಂಟಗೆ ಗೊಬ್ಬರ ಕೊರತೆ ಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದರು. ಯೂರಿಯಾ ಗೊಬ್ಬರದ ತೀವ್ರ ಅಭಾವದಿಂದಾಗಿ ಬೆಳೆಗಾರರಿಗೆ ಎದುರಾಗಿರುವ ಸಂಕಷ್ಟಕ್ಕೆ ಆಡಳಿತ ಯಾವುದೇ ಸ್ಪಂದನೆ ತೋರದ ಹಿನ್ನೆಲೆಯಲ್ಲಿ ರೈತರು ರಸ್ತೆಗೆ ಇಳಿದು ತಮ್ಮ ಆಕ್ರೋಶ ಹೊರಹಾಕಿದರು.ವಿಜಯ ಸರ್ಕಲ್ ನಲ್ಲಿ ಸಂಡೂರು-ಬಳ್ಳಾರಿ, ಕೂಡ್ಲಿಗಿ ಹಾಗೂ ಹೊಸಪೇಟೆ ಸಂಪರ್ಕ ರಸ್ತೆಯನ್ನು ಮಹಿಳೆಯರು ಹಾಗೂ ಪುರುಷ ರೈತರು ಕೆಲಕಾಲ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ಸ್ಥಳಕ್ಕೆ ಆಗಮಿ ಸಿದ ಪೊಲೀಸರು ರೈತರನ್ನು ಮನವೊಲಿಸಲು ಯತ್ನಿಸಿದರೂ ವಿಫಲರಾದರು. ನಂತರ ತಹಸೀಲ್ದಾರರು ಸ್ಥಳಕ್ಕೆ ಬಂದು ರೈತರೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ವಾಗ್ವಾದವೂ ಉಂಟಾಯಿತು.“ಗ