ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಆಕೆಗೆ ಹೆದ್ರುಸಿರುವಂತಹ ಘಟನೆ ಸುಬ್ರಮಣ್ಯ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತನ ಸೋಗಿನಲ್ಲಿ ಆಕೆಯ ಜೊತೆ ಕ್ಲೋಸ್ ಆಗಿ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡ್ತೇನೆ ಅಂತ ಹೆದರಿಸಿರುವ ಆರೋಪ ಇದೆ. ನಿರಂಜನ್ ಎನ್ನುವ ಯುವಕನ ಜೊತೆಗೆ ಆತನ ತಂದೆಯು ಶಾಮೀಲು ಆಗಿರುವ ಆರೋಪ ಇದೆ. ಯುವತಿಯ ಮನೆಯವರಿಗೆ ಗೊತ್ತಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆಗಸ್ಟ್ 30 ಮಧ್ಯಾಹ್ನ 5 ಗಂಟೆಯ ಹೊತ್ತಿಗೆ ಪ್ರಕರಣ ಬೆಳಕಿಗೆ ಬಂದಿದೆ