ಹಾಸನ: ಕಾಡನ್ನು ಉಳಿಸಿ ಬೆಳೆಸುವ ಇಲಾಖೆಗೆ ಕಾಡಿನ ಬಗ್ಗೆ ಕಾಳಜಿ ಇಲ್ಲ ಪ್ರತಿನಿತ್ಯ ಕಾಡಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದು ಸರ್ಕಾರ ಹಾಗೂ ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕದಿದ್ದರೆ ಕಾನೂನು ಹೋರಾಟದ ಮೂಲಕ ಉತ್ತರ ನೀಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕರ್ನಾಟಕದಲ್ಲಿ ದಟ್ಟ ಅರಣ್ಯ ಹಂತ ಹಂತವಾಗಿ ನಾಶವಾಗುತ್ತಿದೆ ಅಲ್ಲದೆ ಅಲ್ಲಿನ ಜೀವ ಸಂಕುವಲವು ನಶಿಸಿ ಹೋಗುತ್ತಿದೆ ಈ ಬಗ್ಗೆ ರಾಜ್ಯ ರೈತ ಸಂಘ ಕಾನೂನು ಹೋರಾಟಕ್ಕೆ ಮುಂದಾಗಿದ್ದು ನೀಲಗಿರಿ ಮರಗಳಿಗೆ ಇನ್ನು ಕಡಿವಾಣ ಬೀಳದಿರುವುದು ಬೇಸರದ ಸಂಗತಿ ಎಂದರು