ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಸೆಪ್ಟೆಂಬರ್ 25ರಂದು ಸಂಜೆ 4 ಗಂಟೆಗೆ ರಿಚರ್ಡ್ಸ್ ಟೌನ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.ಸ್ಥಳಿಯ ನಿವಾಸಿಗಳ ದೂರು ಆಲಿಸಿದ ಅವರು ರಿಚರ್ಡ್ಸ್ ಟೌನ್ ಪಾರ್ಕ್‌ನ ನಡೆಯುವ ದಾರಿಗಳ ದುರಸ್ಥಿ, ಜಿಮ್ ಸಾಧನಗಳ ನಿರ್ವಹಣೆ,ರಸ್ತೆ ಗುಂಡಿಗಳ ಮುಚ್ಚುವಿಕೆ, ಫುಟ್ ಪಾತ್ ಕಾಮಗಾರಿ ಕೆಲಸ ಆದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.