ಹಾಸನ: ಕಾವೇರಿ ನೀರಾವರಿ ನಿಗಮಕ್ಕೆ ಸಾವಿರಾರು ಕೋಟಿ ರೂ.ನಷ್ಟವುಂಟು ಮಾಡುವ ಹುನ್ನಾರ ನಡೆಯುತ್ತಿದ್ದು ಉನ್ನತ ಮಟ್ಟದ ತನಿಖೆ ಮೂಲಕ ಸರ್ಕಾರಕ್ಕಾಗುವ ನಷ್ಟ ತಪ್ಪಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದರು.ಹೇಮಾವತಿ ಭೂ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ಲೋಪವಾಗಿದೆ. 1986ರಲ್ಲಿ ಎಕರೆಗೆ ಐದರಿಂದ ಆರು ಸಾವಿರ ರೂಪಾಯಿ ಪರಿಹಾರ ನಿಗದಿ ಮಾಡಲಾಗಿತ್ತು. ಬಳಿಕ 2005ರಲ್ಲಿ ಮೇಲ್ಮನವಿಯಿಂದ ಅದನ್ನು ಎಕರೆಗೆ 30 ಸಾವಿರ ರೂಪಾಯಿಗೆ ಏರಿಸಲಾಗಿತ್ತು. ಈಗ 15-20 ವರ್ಷಗಳ ನಂತರ ಮತ್ತೆ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿ ಎಕರೆಗೆ 80 ಲಕ್ಷ ರೂಪಾಯಿವರೆಗೆ ಪರಿಹಾರ ಆದೇಶ ಪಡೆಯಲಾಗುತ್ತಿದೆ ಎಂದು ರೇವಣ್ಣ ಹೇಳಿದರು.