"ಫ್ರೆಂಚ್ ಬಿರಿಯಾನಿ" ಸಿನಿಮಾ ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿದ ಅರಸಯ್ಯನ ಪ್ರೇಮ ಪ್ರಸಂಗ ಚಿತ್ರದ ಟ್ರೇಲರ್‌ಅನ್ನು ನಟ ಯುವ ರಾಜ್‌ಕುಮಾರ್ ಬಿಡುಗಡೆ ಮಾಡಿದರು. ಮೇಘಶ್ರೀ ರಾಜೇಶ್ ನಿರ್ಮಾಣದ ಈ ಚಿತ್ರವನ್ನು ಜೆ.ವಿ.ಆರ್ ದೀಪು ನಿರ್ದೇಶನ ಮಾಡಿದ್ದಾರೆ. ಮಹಾಂತೇಶ್ ಜತೆಗೆ ರಶ್ಮಿತ ಗೌಡ, ಪಿ.ಡಿ.ಸತೀಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿನ ಎಂಎಂಬಿ ಲೆಗೆಸಿ ಮಾಲ್‌ನಲ್ಲಿ ಶುಕ್ರವಾರ ಸಂಜೆ ೪ ಗಂಟೆಗೆ ಟ್ರೇಲರ್ ಬಿಡುಗಡೆ ಆಗಿದೆ. ಇನ್ನೇನು ಶೀಘ್ರದಲ್ಲಿ ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಆಗಮಿಸಲಿದೆ.