ಶಿರಸಿ : ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಗುರವಾರ ವಿಶೇಷ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಶಿರಸಿ ನಗರದ ಉರ್ದು ಶಾಲೆಯಿಂದ ಆರಂಭವಾದ ಜಾಥಾವು ಶಿವಾಜಿ ವೃತ್ತ,ಬಿಡ್ಕಿ ವೃತ್ತ,ಸಿ.ಪಿ ಬಜಾರ,ನಟರಾಜ ರಸ್ತೆ,ಬಸ್ಟ್ಯಾಂಡ್ ,ರಾಯರಪೇಟೆ ಮಾರ್ಗವಾಗಿ ಸಾಗಿ ಉರ್ದು ಶಾಲೆಯಲ್ಲಿ ಮುಕ್ತಾಯಗೊಂಡಿತು. ಸುಮಾರು 200 ರಿಂದ 250 ಉರ್ದು ಪ್ರೌಢ ಶಾಲೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿ ಭಿತ್ತಿ ಫಲಕವನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು.