ಪಾಕಿಸ್ತಾನ ಪರ ಘೋಷಣೆ ವಿಚಾರ. ಯಾರಾದ್ರೂ ಕೂಗಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮ ಸರ್ಕಾರ ಕೈಗೊಂಡಿದೆ. ಗಣೇಶ ಬಂದ್ರೆ ಒಳ್ಳೆಯದು ಗಲಾಟೆ ರಾಜಕೀಯ ಬಣ್ಣ ಬಳಿಯದು ಸರಿಯಲ್ಲ. ಬಿಜೆಪಿಯವರು ಬರಿ ಆರೋಪ ಮಾಡ್ತಾರೆಂದು ಹುಬ್ಬಳ್ಳಿಯಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು. ನಗರದಲ್ಲಿ ಮಾತನಾಡಿದವರು ನಮ್ಮ ಸರ್ಕಾರ ಒಳ್ಳೆ ಕೆಲಸ ನೋಡಿ ಅವರಿಗೆ ನಿದ್ದೆ ಬರುತ್ತಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಎಲ್ಲ ಸರ್ಕಾರಗಳು ಕೂಡ ಕೆಲ ಪ್ರಕರಣಗಳನ್ನು ಪಡೆದಿವೆ. ಜಾತಿ ಧರ್ಮ ನೋಡಿ ಕೇಸ್ ಹಿಂಪಡಿಯಲ್ಲ ಎಂದರು.