ಹುಬ್ಬಳ್ಳಿ: ಹೆಸ್ಕಾಂನ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರಗಳನ್ನು ಹೆಸ್ಕಾಂ ಆಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್ ಅವರು ವಿತರಿಸಿದರು. ಮಹಾದೇವ ಹೂಳೆಪ್ಪ ಪೂಜಾರಿ ಅವರು ಚಿಕ್ಕೋಡಿಯ ಯಡೂರು ಹೆಸ್ಕಾಂ ಕಚೇರಿಯಲ್ಲಿ ಮೆಕಾನಿಕ್ (ದರ್ಜೆ 2) ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಜ 01, 2025 ರಂದು ಕರ್ತವ್ಯದ ವೇಳೆ ನಿಧನರಾದರು. ಈಗ ಅವರ ಪುತ್ರ ಅಜೀತ್‌ನಿಗೆ ಅನುಕಂಪದ ಆಧಾರದ ಮೇಲೆ ಕಿರಿಯ ಪವರ್ ಮ್ಯಾನ್ ಹುದ್ದೆ ನೀಡಲಾಗಿದೆ. ಹಾವೇರಿಯ ಜಿಲ್ಲೆಯ ಬ್ಯಾಡಗಿ ಹೆಸ್ಕಾಂ ಕಚೇರಿಯಲ್ಲಿ ಮೆಕಾನಿಕ್ ( ದರ್ಜೆ- 2) ಆಗಿದ್ದ ಶಿವಾನಂದ ಎಸ್ ಅವರು ಸೆ.05, 2024 ರಂದು ನಿಧನರಾಗಿದ್ದರು.