ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಗಣೇಶ್ ಚತುರ್ಥಿ ಹಬ್ಬ ಆಚರಿಸಲಾಗುತ್ತಿದೆ. ನುಂಜಾನೆಯಿಂದಲೇ ಭಕ್ತರು ಗಣೇಶ ಮೂರ್ತಿಗಳನ್ನ ಮನೆಗೆ ಕರೆದೊಯ್ದು ಪ್ರತಿಷ್ಠಾಪನೆ ಮಾಡಿದರು. ಮಧ್ಯಾನ್ಹದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವ ಗಣೇಶ ಮೂರ್ತಿಗಳನ್ನ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ವಿವಿಧ ಕಲಾತಂಡಗಳು ಮತ್ತು ಭಾಜಾಭಜಂತ್ರಿ ಜೊತೆಗೆ ವಿನಾಯಕನನ್ನ ಬರಮಾಡಿಕೊಳ್ಳಲಾಯಿತು