ವಿರಾಜಪೇಟೆ ಯ ವಿದ್ಯಾ ನಗರದ ವಾರ್ಡ್ 8 ಮತ್ತು9 ರಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಾಂಕ್ರೀಟ್ ರಸ್ತೆಯನ್ನು ಟೇಪ್ ಕತ್ತರಿಸಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿ ಗಳ ಕಾನೂನು ಸಲಹೆ ಗಾರರಾದ ಎ ಎಸ್ ಪೊನ್ನಣ್ಣ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ವಾರ್ಡ್ ನ ಸದಸ್ಯರಾದ ಬೆನ್ನಿ ಅಗಸ್ಟೀನ್,ಮಹಮ್ಮದ್ ರಾಫಿ,ಪುರಸಭಾ ಅದ್ಯಕ್ಷ ರಾದ ಎಂ.ಕೆ.ದೇಚಮ್ಮ, ಎಸ್ ಎಚ್ ಮತೀನ್,ಡಿ.ಪಿ.ರಾಜೇಶ್. ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ,ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಅತೀಪ್ ಮನ್ನ,ಸೇರಿದಂತೆ ಪುರಸಭೆ ಕಛೇರಿಯ ಸಿಬ್ಬಂದಿ ಗಳು, ಸ್ಥಳೀಯ ನಿವಾಸಿಗಳು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.