ಭಟ್ಕಳ: ಹೂವಿನಚೌಕ ಸಮೀಪದ ದುಬೈ ಮಾರ್ಕೆಟ್ ಟೌನ್ ಸೆಂಟರ್‌ನಲ್ಲಿ ಇರುವ ರಿಮ್ಸ್ ಅಂಗಡಿ ಹಾಗೂ ಮುರುಡೇಶ್ವರ ತೆರ್ನಮಕ್ಕಿ ಚರ್ಚ ಸಮೀಪ ನಿಷೇಧಿತ ಇ ಸಿಗರೇಟ್ ಮಾರಾಟ ಅಡ್ಡೆಯ ಮೇಲೆ ದಾಳಿ ನಡೆಸಿರುವ ಭಟ್ಕಳ ಹಾಗೂ ಮುರುಡೇಶ್ವರ ಠಾಣಾ ಪೊಲೀಸರು ರು.2.5 ಲಕ್ಷ ರೂ ಕ್ಕೂ ಅಧಿಕ ಮೌಲ್ಯದ ಇಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ ವೇಪ್ಸಗಳನ್ನು ಜಪ್ತುಪಡಿಸಿಕೊಂಡಿದ್ದು, ಮಾರಾಟಗಾರರನ್ನು ವಶಕ್ಕೆ ಪಡೆದಿರುವ ಎರಡು ಪ್ರತ್ಯೇಕ ಘಟನೆ ನಡೆದಿದೆ.ಭಟ್ಕಳ ಟೌನ್ ಸೆಂಟರ್ ಅಂಗಡಿ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ನಗರದ ಮುಗ್ಧಮ್ ಕಾಲೋನಿ ಬಂದರ್ ರೋಡ್ ಗುಲ್ಜಾರ್ ಸ್ಟ್ರೀಟ್ ನಿವಾಸಿ ಮಕಬೂಲ ಇಸ್ಮಾಯಿಲ್ ಮಡಿಕಲ್ (50) ಎಂದು ಗುರುತಿಸಲಾಗಿದೆ.