ಡಿಜೆ ಹಚ್ಚಿದ್ದಕ್ಕೆ ದ್ವೇಷ ಸಾಧಿಸಿ ಯುವಕನಿಗೆ ಚಾಕು ಇರಿದ ಘಟನೆ ನಡೆದಿದೆ. ಹುಬ್ಬಳ್ಳಿಯ ದೇವಾಂಗಪೇಟ ಭೀಮರಾಜ ನಾರಿಯವರ ಎಂಬ ಯುವಕ ಚಾಕು ಇರಿತಕ್ಕೆ ಒಳಗಾಗಿದ್ದು. ಮೊನ್ನೆ ರಾತ್ರಿ ಡಿಜೆ ಬಂದ್ ಮಾಡುವ ವಿಚಾರಕ್ಕೆ ಗಣೇಶ ಮಂಡಳಿ ಯುವಕರಿಗೆ ಅನ್ಯಕೋಮಿನ ಯುವಕರು ಅವಾಜ್ ಹಾಕಿದ್ದು. ಯುವಕರ ನಡುವೆ ವಾಗ್ವಾದ ಆಗಿದ್ದು. ಅದೇ ದ್ವೇಷ ಸಾಧಿಸಿ ನಿನ್ನೆ ರಾತ್ರಿ ಚಮನ್ ಉಣಕಲ್ ಹಾಗೂ ಯುನೂಸ್ ಎಂಬ ಚಾಕು ಇರಿದಿದ್ದಾರೆಂದು ಭೀಮರಾಜ್ ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.