ವಿರಾಜಪೇಟೆ: ಸ್ವರ್ಣಗೌರಿ ಹಬ್ಬದ ಹಿನ್ನಲೆ ವಿರಾಜಪೇಟೆ ಪುರಸಭೆ ಉಪಾಧ್ಯಕ್ಷರು ಮಹಿಳಾ ಸಿಬ್ಬಂದಿಗಳಿಗೆ ಬಾಗೀಣ ನೀಡುವ ಮೂಲಕ ಹಬ್ಬದ ಶುಭಾಶಯ ತಿಳಿಸಿದ್ರು.ವಿರಾಜಪೇಟೆ ಪುರಸಭೆಯಲ್ಲಿ ಇಂದು ಪುರಸಭಾ ಉಪಾಧ್ಯಕ್ಷರಾದ ಶ್ರೀಮತಿ ಪಸಿಹಾ ತಬುಸುಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಜಲೀಲ್, ಪುರಸಭಾ ಹಿರಿಯ ಸದಸ್ಯರಾದ ಶ್ರೀ ಸಿ ಕೆ ಪೃಥ್ವಿನಾಥ್ ಸದಸ್ಯರಾದ ಸುಭಾಷ್ ಮಹಾದೇವ್ ರ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ಬಳೆ ಹೂವನ್ನು ನೀಡುವುದರ ಮೂಲಕ ಶುಭಾಶಯ ಕೋರಿದ್ರು.