ಮಧುಗಿರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಸೇರಿದಂತೆ ಅನೇಕರಿಂದ ಬೃಹತ್ ಪ್ರತಿಭಟನ ರ್ಯಾಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿ ನಡೆದಿದೆ ಪಟ್ಟಣದ ತುಮಕೂರು ಗೇಟ್ ಸರ್ಕಲ್ ಇಂದ ಪ್ರಾರಂಭವಾದ ಈ ಬೃಹತ ಮೆರವಣಿಗೆಯಲ್ಲಿ ಪಕ್ಷಭೇದ ಮರೆತು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನಾಯಕರುಗಳು ಪಾಲ್ಗೊಂಡಿದ್ದರು, ಜೊತೆಗೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಪದಾಧಿಕಾರಿಗಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿ ಮಾಜಿ ಸಚಿವ ಕೆ ಎನ್ ರಾಜಣ್ಣ ರವರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ರಾಜಣ್ಣ ಅವರಿಗೆ ವಿವಿಧ ಮಠಗಳ ಮಠಾಧೀಶರು ಸಾಥ್ ನೀಡಿದ್ದು ಪ್ರತಿಭಟನೆ ಮಧುಗಿರಿ ಉಪ ವಿಭಾಗಾಧಿಕಾರಿಗಳ ಕಚೇರಿಯವರಿಗೂ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯ