ಸಾವಿರಾರು ಜನರ ಉದ್ಯೋಗದಾತ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ್ ಅವರ ಸ್ಮರಣಾರ್ಥವಾಗಿ ಅಂಬರ್ ವ್ಯಾಲಿ ಮ್ಯಾರಥಾನ್ ದೂರದ ಓಟವನ್ನು ಗುರುವಾರ ಮಧ್ಯಾಹ್ನ 2 ಸುಮಾರಿಗೆ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.ಮ್ಯಾರಥಾನ್ ಓಟವು ಟೌನ್ ಕ್ಯಾಂಟೀನ್ ವೃತ್ತದಿಂದ ಪ್ರಾರಂಭವಾಗಿ ರತ್ನಗಿರಿ ರಸ್ತೆ, ಐ ಜಿ ರಸ್ತೆ ಮಾರ್ಗವಾಗಿ ಬೋಳ ರಾಮೇಶ್ವರ ದೇಗುಲ ತಲುಪಿ ಅಲ್ಲಿಂದ ಅಂಬರ್ ವ್ಯಾಲಿ ವಿದ್ಯಾಸಂಸ್ಥೆಯವರೆಗೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಮ್ಯಾರಥಾನ್ ಓಟವು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಪೂರಕವಾಗಿದ್ದು, ಹೃದಯದ ಆರೋಗ್ಯ ಬಲಪಡಿಸುವುದರ ಜೊತೆಗೆ ಶಕ್ತಿಯ