ಸೇಡಂ ಪಟ್ಟಣದ ಉಡಗಿ ರಸ್ತೆ ಹತ್ತಿರ ಸೋಮವಾರ ರಾತ್ರಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸೇಡಂ ನಿವಾಸಿಯಾಗಿದ್ದ ಲಾರಿ ಚಾಲಕ ರಿಯಾಜ್ (43) ಸೋಮವಾರ ಮಧ್ಯರಾತ್ರಿ 3.30 ಕ್ಕೆ ವಾಸವದತ್ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ತೆರಳುವ ಸಮಯದಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಜೇಹಿರ್ ಹೈಯಾಳ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳವಾರ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ...