ಬೇಲೂರು.ಯಾವುದೇ ರಾಜಕೀಯ ಮಹತ್ವ ಬೆರೆಸದಿರಿ ಪಕ್ಷ ಯಾವುದೇ ಇರಲಿ ಸಾರ್ವಜನಿಕರ ಕೆಲಸ ಮಾಡಲು ಸದಾ ಸಿದ್ಧರಿದ್ದೇವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇಶಾಣಿ ಆನಂದ್ ತಿಳಿಸಿದರು. ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಲೋಕಸಭಾ ಸದಸ್ಯರ ಅನುದಾನದಡಿ 5 ಲಕ್ಷ ವೆಚ್ಚದಲ್ಲಿ ಅಡುಗೆಮನೆ ಮತ್ತು ಶೌಚಾಲಯ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಳೆದ 5 ತಿಂಗಳ ಹಿಂದಷ್ಟೇ ಕೆಪಿಸಿಸಿ ಉಪಾಧ್ಯಕ್ಷ ಬಿ ಶಿವರಾಂ ಹೆಬ್ಬಾಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮುದಾಯ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತು ಹೋಗಿದ್ದನ್ನ ಗಮನಿಸಿ ಲೋಕಸಭಾ ಸದಸ್ಯರು ಸ್ಪಂದಿಸಿದ್ದಾರೆ ಎಂದರು.