ಬಗ್ಗೋಣ ದ ವ್ಯಕ್ತಿ ನಾಪತ್ತೆ,ಪತ್ತೆಗೆ ಮನವಿ ಕುಮಟಾ: ತಾಲೂಕಿನ ಬಗ್ಗೋಣ ಇಪ್ಪಡಿ ಗ್ರಾಮದ ನಿವಾಸಿ ಈಶ್ವರ ತಂದೆ ನಾಗು ಮುಕ್ರಿ ಅವರು ಕಾಣೆಯಾಗಿದ್ದು, ಇವರನ್ನು ಪತ್ತೆಹಚ್ಚಲು ಕುಮಟಾ ಪೊಲೀಸರು ಮತ್ತು ಕುಟುಂಬಸ್ಥರು ಸಾರ್ವಜನಿಕರ ತುರ್ತು ನೆರವು ಕೋರಿದ್ದಾರೆ. ಈಶ್ವರ ಮುಕ್ರಿ ಮನೆಯಿಂದ ಹೊರಗೆ ಹೋಗಿದ್ದು, ಇದುವರೆಗೂ ಮರಳಿ ಬಂದಿಲ್ಲ. ಕುಮಟಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಕಾಣೆಯಾದ ಈಶ್ವರ ಮುಕ್ರಿ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಅಥವಾ ಅವರು ಕಂಡುಬಂದಲ್ಲಿ, ದಯವಿಟ್ಟು ತಕ್ಷಣವೇ ಕುಮಟಾ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಲು ವಿನಂತಿಸಲಾಗಿದೆ.ಸಂಪರ್ಕಿಸಬೇಕಾದ ಸಂಖ್ಯೆಗಳು:ದೂರವಾಣಿ: 08386-222333 ಮೊಬೈಲ್: 9480805272