ಸಾರ್ವಜನಿಕ ಗಣೇಶೋತ್ಸವದಲ್ಲಿ ಹೆಚ್ಚಿನ ಸೌಂಡ್ ಡಿಜೆ ಬಳಸದಂತೆ ನ್ಯಾಯಲಯದ ಆದೇಶ ಇದ್ರು ಕೂಡ ಕಾನೂನು ಉಲ್ಲಂಘಿಸಿದ ಹಿನ್ನಲೆ ಕುಶಾಲನಗರದಲ್ಲಿ ಪೊಲೀಸರು ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.ಕುಶಾಲನಗರ ವ್ಯಾಪ್ತಿಯಲ್ಲಿ ಗಣೇಶೋತ್ಸವದಲ್ಲಿ 120 ಡಿಸಿಬಲ್ ಗಿಂತ ಹೆಚ್ಚಿನ ಸೌಂಡ್ಸ್ ಬಳಸಿದ ಹಿನ್ನಲೆ ಕುಶಾಲನಗರ ಪೊಲೀಸರು 5 ಸೌಂಡ್ ಸಿಸ್ಟಮ್, 5 ಭಾರಿ ವಾಹನಗಳು ಹಾಗೂ ವಾಹನ ಚಾಲಕರ ಮೇಲೆ ಬಿಎನ್ಎಸ್ ಆಕ್ಟ್ 36, ಹಾಗೂ ಕೆ.ಪಿ ಆಕ್ಟ್ 109 ರ ಅಡಿಯಲ್ಲಿ ಕುಶಾಲನಗರ ನಗರ ಠಾಣಾ ಪೊಲೀಸರುಬ ಕಾನೂನು ಕ್ರಮ ಕೈಗೊಂಡಿದ್ದಾರೆ.