ಸರಗೂರು ಅಂಚೆ ಇಲಾಖೆ ಕಚೇರಿಯಲ್ಲಿ ಎಫ್. ಡಿ ನಿಗದಿತ ಠೇವಣಿ, ಆರ್ ಡಿ ಇನ್ನಿತರ ಯೋಜನೆಯಲ್ಲಿ ಗ್ರಾಹಕರು ಇಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರ ವಿರುದ್ದ ಅಂಚೆ ಕಚೇರಿ ಎದುರು ಗ್ರಾಹಕರು ಪ್ರತಿಭಟನೆ ನಡೆಸಿದರು. ಬ್ಯಾಂಕ್ ಗಳಿಂದ ಅಂಚೆ ಇಲಾಖೆಯಲ್ಲಿ ಹೆಚ್ಚು ಬಡ್ಡಿ ಹಣ ಸಿಗುತ್ತದೆ ಎಂಬ ಆಸೆಯಿಂದ ಬೇರೆ ಬೇರೆ ಬ್ಯಾಂಕ್ ಗಳಿದ್ದ ಎಫ್.ಡಿ. ಹಣವನ್ನು ಅಂಚೆ ಕಚೇರಿಗೆ ತಂದು ಠೇವಣಿ ಇಟ್ಟಿದ್ದರು. ತಮ್ಮ ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕೆ ಸೇರಿದಂತೆ ಭವಿಷ್ಯದ ಹಲವು ಕಾರ್ಯಗಳಿಗೆ ವಿನಿಯೋಗಿಸಲು ಠೇವಣಿ ಇಟ್ಟಿದ್ದ ಲಕ್ಷಾಂತರ ರೂ. ಹಣ ಏಕಾಏಕಿ ಖಾತೆಯಿಂದ ಡ್ರಾ ಆಗಿದೆ. ಸ್ಥಳೀಯ ಇಲಾಖಾಧಿಕಾರಿಗಳು ಖಾತೆದಾರರ ಗಣವನ್ನಜ ಡ್ರಾ ಮಾಡಿ ತೆಗೆದುಕೊಂಡಿದ್ದಾರೆ ಎಂಬುದು ಆರೋಪ.