ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಐದು ಆರು ದಿನಗಳಿಂದ ನೀರಿಲ್ಲದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಆಸ್ಪತ್ರೆಯ ಆವರಣದಲ್ಲಿರುವ ಬೋರ್ವೆಲ್ ಕೆಟ್ಟು ಹೋಗಿದ್ದು ಪುರಸಭೆಯಿಂದ ಬರಬೇಕಿದ್ದ ನೀರು ಸಹ ಬಾರದೆ ಅವ್ಯವಸ್ಥೆಗೆ ಕಾರಣವಾಗಿದೆ ಶೌಚಾಲಯಗಳಲ್ಲಿ ನೀರಿಲ್ಲದೆ ರೋಗಿಗಳು ಮತ್ತು ಕೇರ್ ಟೇಕರ್ ಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ನೀರಿಲ್ಲದೆ ಶೌಚಾಲಯಗಳು ಗಬ್ಬು ವಾಸನೆ ಬರುತ್ತಿವೆ ಇಡೀ ಆಸ್ಪತ್ರೆಗೆ ಕೇವಲ ಒಂದು ಟ್ಯಾಂಕರ್ ನೀರನ್ನು ಮಾತ್ರ ಕೊಡುತ್ತಿದ್ದಾರೆ ಎಂದು ರೋಗಿಯೊಬ್ಬರು ಶುಕ್ರವಾರ ಮಧ್ಯಾನ 12 ಗಂಟೆಯಲ್ಲಿ ತಿಳಿಸಿದ್ದಾರೆ